ರೋಚಕ ತಿರುವು ಪಡೆದ ಜೊತೆಜೊತೆಯಲಿ.. ಹೊಸ ಕಲಾವಿದರ ಎಂಟ್ರಿ..

ಜೊತೆಜೊತೆಯಲಿ ಧಾರಾವಾಹಿ ಶುರು ಆದಾಗಿನಿಂದಲೂ ದಿನಕ್ಕೊಂದು ತಿರುವು ಪಡೆಯುತ್ತಲೇ ಬರುತ್ತಿದೆ.. ಸನ್ನಿವೇಶಕ್ಕೆ ತಕ್ಕಂತೆ ಹೊಸ ಪಾತ್ರಗಳ ಪರಿಚಯವೂ ಆಗುತ್ತಿದೆ..

ಈಗಾಗಲೇ ಅನು ಹಾಗೂ ಆರ್ಯನ ಜೋಡಿಯ ನಡುವೆ ಝೇಂಡೆ ಮೀರಾ ಹಾಗೂ ನೀಲ್ ಆಗಮನವನ್ನೇ ಪ್ರೇಕ್ಷಕರು ಸಹಿಸದಾಗದಷ್ಟು ಧಾರಾವಾಹಿಯ ಮೇಲಿನ ಅಭಿಮಾನವನ್ನು ಹೆಚ್ಚಿಸಿಕೊಂಡಿದ್ದಾರೆ..

ಆದರೆ ಅಸಲಿ ಕತೆ ಬೇರೇನೆ ಇದೆ.. ಹೌದು.. ಇಷ್ಟು ದಿನ ಇದ್ದವರ್ಯಾರೂ ವಿಲನ್ ಗಳಲ್ಲ… ಅವರ್ಯಾರೂ ಕೆಟ್ಟವರೂ ಅಲ್ಲ ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದರಷ್ಟೇ.. ಆದರೆ ಈಗ ಧಾರಾವಾಹಿಯ ಅಸಲಿ ಕತೆ ಶುರುವಾಗಿದೆ..

ಹೌದು ಧಾರಾವಾಹಿಯಲ್ಲಿ ನಿಜವಾದ ವಿಲನ್ ನ ಆಗಮನವಾಗಿದ್ದು ಜಲಂಧರ್ ಎಂಬ ಹೊಸ ಪಾತ್ರವನ್ನು ಪರಿಚಯಿಸುತ್ತಿದ್ದಾರೆ.. ಈಗಾಗಲೇ ಸೆರೆಮನೆ ವಾಸದಲ್ಲಿರುವ ಜಲಂಧರ್ ಬಿಡುಗಡೆಯಾಗುತ್ತಿದ್ದಾನೆ ಎಂಬ ಮಾತು ಕೇಳಿ ನಮ್ ಝೇಂಡೆ ಸ್ವಲ್ಪ ಶಾಕ್ ಆಗಿದ್ದು ಆರ್ಯವರ್ಧನ್ ರ ಸೆಕ್ಯುರಿಟಿಯನ್ನು ಹೆಚ್ಚಿಸಿದ್ದಾರೆ..

ಅಷ್ಟೇ ಅಲ್ಲದೆ ಆರ್ಯವರ್ಧನ್ ಅನು ನೋಡುವ ಸಲುವಾಗಿ ಫ್ಲೈಟ್ ಅನ್ನು ಕ್ಯಾನ್ಸಲ್ ಮಾಡಿ ಮುಂದಿನ ಫ್ಲೈಟ್ ಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು.. ಆದರೆ ಲಂಡನ್ ನಲ್ಲಿ ಆರ್ಯವರ್ಧನ್ ರಿಗೆ ಅಪಾಯವನ್ನುಂಟು ಮಾಡಲು ಅದಾಗಲೇ ಜಲಂಧರ್ ಪ್ಲಾನ್ ಮಾಡಿಯಾಗಿತ್ತು.. ಇದೀಗ ಅನುನೇ ಆರ್ಯವರ್ಧನ್ ರಿಗೆ ಆಗಬಹುದಾದ ಅಪಾಯ ತಪ್ಪಿಸಿದಂತಾಗಿದೆ..

ಆರ್ಯವರ್ಧನ್ ರ ಲಂಡನ್ ಟ್ರಿಪ್ ಕ್ಯಾನ್ಸಲ್ ಆಗಲಿದ್ದು ಮುಂದೆ ರೋಚಕ ಕತೆಯ ಎಳೆಯನ್ನು ನಿರ್ದೇಶಕರು ನಮ್ಮ ಮುಂದೆ ಇಡಬಹುದೆಂದು ನಿರೀಕ್ಷಿಸಬಹುದಾಗಿದೆ.. ಇನ್ನೊಂದು ಕಡೆ ಆರ್ಯವರ್ಧನ್ ಅವರು ದೊಡ್ಡ ಮಟ್ಟಕ್ಕೆ ಬೆಳೆದುಬಂದ ರೀತಿಯನ್ನು ನೋಡಬಹುದೆನ್ನಬಹುದು..

Be the first to comment

Leave a Reply

Your email address will not be published.


*